ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೋಲಾರ

ಶಾಲಾ ಶಿಕ್ಷಣ ಇಲಾಖೆ

wrappixel kit

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೋಲಾರ

ಶಿಕ್ಷಣವು ಅರಿವಿಂಗೆ ಅಡಿಗಲ್ಲು, ತಿಳಿವಿಂಗೆ ತಳಹದಿ, ಬಾಳಿಂಗೆ ಒಡನಾಡಿ ಎಂಬಂತೆ ಮಗುವಿನ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಗುರಿ. ಮಾನವ ಸಂಪನ್ಮೂಲದ ಬಳಕೆ ಸಮರ್ಪಕವಾಗಿ ಆದಾಗ ರಾಷ್ಟ್ರವು ಸಮೃದಿಯತ್ತ ಸಾಗಲು ಸಾಧ್ಯ. ಶಿಕ್ಷಣ ರಂಗದಲ್ಲಿ ಯಾವಾಗಲೂ ಕೇಳಿಬರುತ್ತಿರುವ ವಿಚಾರವೆಂದರೆ “ ಶಿಕ್ಷಣದ ಗುಣಮಟ್ಟದ ಸುಧಾರಣೆ” ಈ ಸುಧಾರಣಾ ಕ್ರಮಗಳನ್ನು ನಾವು ಸ್ವಾತಂತ್ರ್ಯದ ನಂತರ ನಿಯೋಜಿಸಲ್ಪಟ್ಟ ಎಲ್ಲಾ ಆಯೋಗಗಳಲ್ಲಿ ಗಮನಿಸುತ್ತಿದ್ದೇವೆ. ವಿಶೇಷವಾಗಿ ಕೊಠಾರಿ ಆಯೋಗವು ‘ಶಿಕ್ಷಣದ ಗುಣಮಟ್ಟದ ಮೇಲೆ ಪ್ರಭಾವ ಬೀರುವ ಸಕಲ ಅಂಶಗಳಲ್ಲಿ ಶಿಕ್ಷಕರ ಗುಣಮಟ್ಟದ ಸಾಮರ್ಥ್ಯ ಹಾಗು ವರ್ತನೆಗಳು ನಿಸ್ಸಂದೇಹವಾಗಿಯೂ ಗಮನಾರ್ಹವಾದವು’ ಎಂದು ಸ್ಪಷ್ಟಪಡಿಸುತ್ತದೆ. ಶಿಕ್ಷಣ ರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ಗುರಿ ಸಾಧಿಸುವ ದಿಸೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು 1986 ರಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಭಾರತ ಸರ್ಕಾರ ಜಾರಿಗೊಳಿಸಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ನೀತಿಯ ಭಾಗವಾಗಿ ಡಯಟ್ ಗಳನ್ನು 1988 ರ ಫೆಬ್ರವರಿಯಲ್ಲಿ-ಮಾರ್ಚ್ ಸಮಯದಲ್ಲಿ  ಸ್ಥಾಪಿಸಲಾಯಿತು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಕೋಲಾರದಲ್ಲಿ ಅಕ್ಟೋಬರ್ 1994 ರಲ್ಲಿ ಪ್ರಾರಂಭವಾಯಿತು. ತದನಂತರ 2003 ರಲ್ಲಿ ಚಿಕ್ಕಹಸಾಳ ಗ್ರಾಮದ ಸಮೀಪ ಸುಮಾರು 4.5 ಎಕರೆ ವಿಸ್ತಾರವುಳ್ಳ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಡಯಟ್‌ ಕೋಲಾರದ ಪ್ರಧಾನ ಧ್ಯೇಯ ಗುಣಮಟ್ಟದ ಪ್ರಾಥಮಿಕ ಹಾಗೂ ವಯಸ್ಕರ ಶಿಕ್ಷಣದ ಸಫಲತೆಗಾಗಿ ಶ್ರಮಿಸುವುದಾಗಿದೆ.

ಈ ಸಂಸ್ಥೆಯು 7 ಶೈಕ್ಷಣಿಕ ವಿಭಾಗಗಳನ್ನು ಹಾಗೂ 1 ಆಡಳಿತ ವಿಭಾಗವನ್ನು ಹೊಂದಿದೆ.  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ.) ನಿರ್ದೇಶನಗಳನ್ವಯ ಡಯಟ್‌  ಕಾರ್ಯೋನ್ಮಕವಾಗಿದೆ. ಸಂಸ್ಥೆಯು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವ ವಿದ್ವತ್ಪೂರ್ಣ ಕಾರ್ಯಗಳಲ್ಲಿ ತೊಡಗಿದೆ. ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶೈಕ್ಷಣಿಕ ನಾಯಕತ್ವ, ವಿಜ್ಞಾನ ಕಾರ್ಯಕ್ರಮಗಳ ಉತ್ತೇಜನ, ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಾಲಾ ಶಿಕ್ಷಣದಲ್ಲಿ ಪಾಂಡಿತ್ಯಪೂರ್ಣ ನಾಯಕತ್ವವನ್ನು ಬೆಳೆಸುವ ಗುರಿಯೊಂದಿಗೆ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಅಗತ್ಯ ತರಬೇತಿಗಳನ್ನು ನೀಡುತ್ತಾ ಅವರನ್ನು ವೃತ್ತಿಪರರನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಜೊತೆಗೆ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಬೇಕಾದ ಬೆಂಬಲವನ್ನು ನೀಡುವ ದಿಸೆಯಲ್ಲಿ ಪ್ರತಿ ವರ್ಷವೂ ಶೈಕ್ಷಣಿಕ ಸಂಶೋಧನಾ ಅಧ್ಯಯನಗಳನ್ನು ನಡೆಸುತ್ತಾ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿದೆ.

ಮತ್ತಷ್ಟು ಓದಿ

ಇನ್‌ ಫೋಕಸ್

×
ABOUT DULT ORGANISATIONAL STRUCTURE PROJECTS